Thursday, November 20, 2008

Dr Nellikatte Siddesh - Article by Nagaraj in Suddigiduga 22-11-2008







ಡಾ. ನೆಲ್ಲಿಕಟ್ಟೆ ಸಿದ್ದೇಶ್ರವರ ಸಂಶೋಧನ ಕೃತಿಯನ್ನು ದಿನಾಂಕ: 23-11-2008ರಂದು ಬಳ್ಳಾರಿಯಲ್ಲಿ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಡಾ. ಸುಭಾಷ್ ಭರಣಿಯವರು ಲೋಕಾರ್ಪಣೆ ಮಾಡುವ ನಿಮಿತ್ತ ಈ ಲೇಖನ


ಸೃಜನಶೀಲ ಪ್ರತಿಭಾವಂತ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್

ಹುಲ್ಲಾಗಿ ಬೆಳೆಯಲಿ ನಿಯತ್ತಿಲಿ ಬಾಳಲಿ
ಮಾವಿನ ತೋಪ್ನಂಗೆ ನೆರಳಾಗಲಿ ಸಿದ್ದೇಶಿ
ಜಯವಂತನಾಗಿ ಬೆಳಗಲಿ
ಆಸಿವಂತನಾಗು ದೇಸಕೆ ದೊಡ್ಡವನಾಗು
ರಾಶಿ ಹೊನ್ನಿಲಿ ದೊರೆಯಾಗು ಸಿದ್ಧೇಶಿ
ನೀತಿಯ ಮುತ್ತಾಗು ಜನರಿಗೆ-

ಎಂಬ ಜಾನಪದ ಕವಯಿತ್ರಿ ಹೆತ್ತವ್ವನ ಹಾರೈಕೆಯಂತೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ರವರು ಸ್ವಸ್ಥ ಸಮಾಜ ನಿಮರ್ಾಣವಾಗಬೇಕೆಂಬ ಕಾಳಜಿಯನ್ಹೊಂದಿರುವ ಬಹುಮುಖ ಪ್ರತಿಭೆ. ಚಿತ್ರದುರ್ಗ ತಾಲ್ಲೂಕು ಭರಮಸಾಗರ ಹೋಬಳಿಯ ನೆಲ್ಲಿಕಟ್ಟೆ ಗ್ರಾಮದ ಮಾರಕ್ಕ-ಸಿದ್ದಪ್ಪ ದಂಪತಿಗಳ ಮಡಿಲಲ್ಲಿ ಮಾಚರ್್ 4, 1972ರಂದು ಜನಿಸಿದ ಸಿದ್ದೇಶ್ ಕಡುಬಡತನದಲ್ಲಿ ನೊಂದು ಬೆಂದವರು. ಬಡತನಕ್ಕೆ ಬಾಗದೆ, ಕೂಲಿನಾಲಿ ಮಾಡುತ್ತಲೆ ವ್ಯಾಸಂಗ ಮಾಡಿದವರು. ಸಿದ್ದೇಶ್ರವರಿಗೆ ಅನ್ನ ಆಹಾರ ಆಶ್ರಯಕ್ಕೆ ಬಡತನವಿತ್ತೇ ವಿನಹ ಅಧ್ಯಯನಕ್ಕಲ್ಲ ಎಂಬಂತೆ ಬಿ.ಎ. ಪದವಿಯನ್ನು 7ನೇ ರ್ಯಾಂಕ್ನೊಂದಿಗೆ, ಬಿ.ಇಡಿ. ಪದವಿಯನ್ನು ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮರಣಾರ್ಥ ಚಿನ್ನದಪದಕದೊಂದಿಗೆ, ಕನ್ನಡ ಎಂ.ಎ. ಪದವಿಯನ್ನು 3ನೇ ರ್ಯಾಂಕ್ನೊಂದಿಗೆ, ಎಂ.ಇಡಿ. ಪದವಿಯನ್ನು ಉನ್ನತ ದಜರ್ೆಯೊಂದಿಗೆ, ಪಿಎಚ್.ಡಿ. ಪದವಿಯನ್ನು ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ ಒಂದು: ಅಧ್ಯಯನ ಎಂಬ ಮಹಾ ಪ್ರಬಂಧಕ್ಕೆ ಪಡೆದಿರುವ ಸಾಧನಶೀಲರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡಲು ಉತ್ತೇಜಿಸುವಂತಹ ಕವನಗಳ ಸಂಕಲನವಾದ ಬಿಸಿಲು-ಮಳೆ ಕೃತಿಯನ್ನು, ಶಿವಶರಣರ ಬದುಕನ್ನು ಪರಿಚಯಿಸುವ ಛಲಬೇಕು ಶರಣಂಗೆ ಕೃತಿಯನ್ನು ಪ್ರಕಟಿಸಿರುವ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ರವರು ಸಾವಿಲ್ಲದ್ದೇ ಸಾಹಿತ್ಯ. ಇದೊಂದು ಸಂಜೀವಿನಿ; ಮೌಲ್ಯಗಳನ್ನು ಆದರ್ಶಗಳನ್ನು ಶಾಶ್ವತವಾಗಿ ಸೆರೆಹಿಡಿದಿಟ್ಟಿರುವ ಮಾಧ್ಯಮ. ಬರಹ ತಾಳಿದ ಸಶಕ್ತ ಭಾವನೆಯು ಸಾಹಿತ್ಯವಾಗುತ್ತದೆ. ಬದುಕನ್ನು ಹಿತವಾಗಿಸುವುದು ಸಾಹಿತ್ಯ. ವ್ಯಷ್ಟಿ-ಸಮಷ್ಟಿಯ ಸಂಸ್ಕೃತಿಯನ್ನು ಮನಮುಟ್ಟುವಂತೆ; ಹೃದಯ ತಟ್ಟುವಂತೆ ಸಹೃದಯನಿಗೆ ತಲುಪಿಸುವ ದೀಪ್ತಿಯೇ ಸಾಹಿತ್ಯ. ಎಂದು ಹೇಳಿರುವಂತೆಯೇ ಉದಾತ್ತವಾಗಿ ಬದುಕಲು ಉತ್ತೇಜಿಸುವಂತಹ ವ್ಯಕ್ತಿತ್ವ ವಿಕಾಸ ಹಾಗೂ ಕನ್ನಡ ಸಾಹಿತ್ಯ ಎಂಬ ಅಮೂಲ್ಯ ಕೃತಿಯನ್ನು, ಸಂಶೋಧನಾ ಕೃತಿಯಾದ ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ ಕೃತಿಯನ್ನು ಸಮಪರ್ಿಸಿದ್ದಾರೆ. ಅಲ್ಲದೆ ಪ್ರೊ. ಕೃಷ್ಣಯ್ಯನವರ ಭಾರತದ ಧೀರ ಮಹಿಳೆ ಚಿತ್ರದುರ್ಗದ ಒನಕೆ ಓಬವ್ವ ಕೃತಿಯನ್ನು, ಪಿ. ಚಂದ್ರಶೇಖರಯ್ಯನವರೊಂದಿಗೆ ಚಿತ್ರದುರ್ಗ ಜಿಲ್ಲಾ ಸಾಹಿತಿಗಳನ್ನು ಪರಿಚಯಿಸುವ ಸಾಹಿತಿ ಸಂಕಲ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಡಾ. ನೆಲ್ಲಿಕಟ್ಟೆಯವರ ಕಥೆ, ಕವನ, ಲೇಖನಗಳು ಹಲವು ಪತ್ರಿಕೆ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ಭಾಷಣಗಳು ಪ್ರಸಾರವಾಗಿದೆ. ಅಖಿಲಭಾರತ 71 ಮತ್ತು 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನವಾಚನ ಮಾಡಿದ್ದಾರೆ. ಹಲವು ವಿಚಾರ ಸಂಕಿರಣಗಳಲ್ಲಿ, ಶಿಬಿರಗಳಲ್ಲಿ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇವರ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ವಿವಿಧ ಸಂಘಸಂಸ್ಥೆಗಳು ಉತ್ತಮ ಶಿಕ್ಷಕ ಶಿಕ್ಷಕರತ್ನ, ಶಿಕ್ಷಣ ಭೂಷಣ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ ಅಖಿಲ ಕನರ್ಾಟಕ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ-ಮೊದಲಾದ ಗೌರವ ಮನ್ನಣೆ ನೀಡಿ ಅಭಿನಂದಿಸಿದೆ. ಸ್ಪಧರ್ಾಜಗತ್ತು ಮತ್ತು ಸೈಕಾಲಜಿ ಅಂಡ್ ಪರ್ಸನಾಲಿಟಿ ಡೆವಲಪ್ಮೆಂಟ್ ಮಾಸಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿರುವ ಸಿದ್ದೇಶ್ರವರ ವಿನಯತೆ, ಸ್ನೇಹಶೀಲ, ವೃತ್ತಿ ನಿಷ್ಠೆ, ಸಜ್ಜನಿಕೆ, ಸೃಜನಶೀಲತೆಗಳು ಆಪ್ಯಾಯಮಾನವಾದವುಗಳು. ಪ್ರಸ್ತುತ ಯಳಗೋಡು ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವರು. ಅವರ ಸಾಹಿತ್ಯ ಕೃಷಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆಯು ದ್ವಿಗುಣಗೊಳ್ಳಲಿ.


ಬಿ.ಎ. ನಾಗರಾಜ್, ಎಂ.ಎ.
ಕನ್ನಡ ಉಪನ್ಯಾಸಕರು
ಬಾಳಿಗೊಂದು ಗುರಿ ಪದವಿಪೂರ್ವ ಕಾಲೇಜು
ಮತ್ತೋಡು
ಹೊಸದುರ್ಗ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ

Dr Kumara Chalya being felicitated on 23-11-2008 at Bellary



ದಿನಾಂಕ: 23ನೇ ನವಂಬರ್ 2008ರಂದು ಡಾ. ಕುಮಾರಚಲ್ಯ ಅವರಿಗೆ ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯು ಡಾ. ಎಚ್. ನರಸಿಂಹಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವ ಈ ಶುಭ ಸಂದರ್ಭ ನಿಮಿತ್ತ ಈ ಲೇಖನ

ಡಾ. ಕುಮಾರಚಲ್ಯ

ವಿಭಾಗ ಮುಖ್ಯಸ್ಥರು, ಕನ್ನಡ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.

ಸರಳ ಸಜ್ಜನಿಕೆಯ ಸೃಜನಶೀಲ ವಿದ್ವಾಂಸ: ಡಾ. ಕುಮಾರಚಲ್ಯವಿನಯ, ವಿಧೇಯತೆಯಿಂದ ವಿದ್ಯೆಯನ್ನು ಪಡೆದು; ಸದ್ಗುಣವಂತರಾಗಿ, ಸದಾ ಸತ್ಕಾರ್ಯದಲ್ಲಿ ನಿರತರಾಗಿ; ಸಾರ್ಥಕವಾಗಿ ಬಾಳಿರೆಂದು ತಮ್ಮ ಶಿಷ್ಯ ಸಂಕುಲಕ್ಕೆ ಬೋಧಿಸುತ್ತಲೇ ಬಾಳಿ ಬೆಳಗುತ್ತಿರುವ ಸರಳ ಸಜ್ಜನಿಕೆಯ ಮೇಸ್ಟ್ರು ಡಾ. ಸಿ.ಎಸ್. ಶಿವಕುಮಾರಸ್ವಾಮಿ, ಕುಮಾರಚಲ್ಯ ಎಂಬ ಕಾವ್ಯನಾಮದಿಂದ ಸಾಹಿತ್ಯ ವಲಯದಲ್ಲಿ ಸುಪ್ರಸಿದ್ಧರಾಗಿರುವರು. ಸುಮಾರು ಮೂರು ದಶಕಗಳಿಂದ ಸ್ನಾತಕೋತ್ತರ ಪದವಿ ತರಗತಿಗಳಿಗೆ ಬೋಧಿಸುವಲ್ಲಿ ತೊಡಗಿಕೊಂಡು, ಹೊಸ ಹೊಸ ಬೋಧನಾ ವಿಧಾನಗಳ ಮೂಲಕ ವಿದ್ಯಾಥರ್ಿಗಳ ಹೃನ್ಮನವನ್ನು ವಿಕಾಸಗೊಳಿಸುತ್ತಿರುವ ಡಾ. ಕುಮಾರಚಲ್ಯ ಅವರು ಶಿಸ್ತು, ನಿಷ್ಠೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿರುವ ಆದರ್ಶ ಅಧ್ಯಾಪಕರು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಚಲ್ಯ ಗ್ರಾಮದಲ್ಲಿ ಮಹದೇವಮ್ಮ-ಸಿ.ಎನ್. ಶಿವಬಸವಯ್ಯ ದಂಪತಿಗಳ ಮಡಿಲಲ್ಲಿ ಆಕ್ಟೋಬರ್ 18, 1954ರಲ್ಲಿ ಜನಿಸಿದ ಸುಪುತ್ರರು. ತಂದೆ ಸಿ.ಎನ್. ಶಿವಬಸವಯ್ಯನವರು ಪ್ರಗತಿಪರ ಚಿಂತನೆಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿದ ಸಮಾಜಸುಧಾರಕರು. ಶ್ರೇಷ್ಠ ಶಿಕ್ಷಣ ತಜ್ಞರು. ಜಾತಿಭೇದ ತೊಲಗಿಸಲು ಶಕ್ತಿಮೀರಿ ಹೋರಾಡಿದವರು. ನೊಂದವರ ನೋವು ನಿವಾರಿಸಲು ಹೆಣಗಾಡಿದವರು. ಹಸಿದವರಿಗೆ ಅನ್ನದಾನವ ಮಾಡಿದವರು. ಅಕ್ಷರ ವಂಚಿತರಿಗೆ ಅಕ್ಷರವ ಕಲಿಸಿ ಅಜ್ಞಾನವನ್ನು ಹೋಗಲಾಡಿಸಲು ತಮ್ಮ ಸಂಪೂರ್ಣ ಜೀವನವನ್ನೇ ಸಮಪರ್ಿಸಿದವರು. ಶೋಷಿತರ ಏಳಿಗೆಗಾಗಿ ತಮ್ಮ ಆಸ್ತಿಯನ್ನೇ ದಾನ ಮಾಡಿದ ದಾನಶೂರರು. ಅಂಥ ಅಪೂರ್ವ ವ್ಯಕ್ತಿತ್ವದ ಮೇಷ್ಟ್ರು ಶಿವಬಸವಯ್ಯನವರ ಸತ್ಕಾರ್ಯಗಳನ್ನು ಮುಂದುವರಿಸುತ್ತಿರುವ ಕುಮಾರಚಲ್ಯ ತಂದೆಗೆ ತಕ್ಕ ಮಗ. ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದ ಶಿವಕುಮಾರಸ್ವಾಮಿಯವರು 1977ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಶ್ರೀಕಂಠಯ್ಯ ಸ್ಮಾರಕ ಚಿನ್ನದ ಪದಕ, ಪ್ರೊ. ಟಿ.ಎಸ್. ವೆಂಕಣ್ಣಯ್ಯ ಸ್ಮಾರಕ ಚಿನ್ನದ ಪದಕ, ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಚಿನ್ನದ ಪದಕ, ಬಿ.ಎಸ್. ತಮ್ಮಯ್ಯ ಚಿನ್ನದ ಪದಕ, ಕೆ.ನೀ. ಸಿದ್ದಪ್ಪ ಚಿನ್ನದ ಪದಕ, ನರಸಮ್ಮ ನಾರಾಯಣಶಾಸ್ತ್ರಿ ಚಿನ್ನದ ಪದಕ, ಮಹಾವಿದ್ವಾನ್ ಅಂಬಳೆ ರಾಮಕೃಷ್ಣಶಾಸ್ತ್ರಿ ಪಾರಿತೋಷಕ, ಪಂಡಿತ ತಿರುನಲ್ಲೂರು ಶ್ರೀನಿವಾಸ ರಾಘವಾಚಾರ್ ಪಾರಿತೋಷಕ-ಹೀಗೆ 6 ಚಿನ್ನದ ಪದಕ, 2 ಪಾರಿತೋಷಕಗಳೊಂದಿಗೆ ಕನ್ನಡ ಎಂ.ಎ. ಪದವಿಯನ್ನು ಪಡೆದ ಸೃಜನಶೀಲ ಪ್ರತಿಭೆ.ಅಪ್ಪನ ಬಳುವಳಿ ಪರಿಶುದ್ಧ ನಡೆ-ನುಡಿಯ ಸಂಸ್ಕಾರ ಮಾತ್ರ. ವ್ಯಾಸಂಗಾವಧಿಯಲ್ಲಿ ಸಾಕಷ್ಟು ಆಥರ್ಿಕ ಸಂಕಷ್ಟಗಳನ್ನು ಅನುಭವಿಸುತ್ತಾ ಅಧ್ಯಯನ ಮಾಡಿದ ಶಿವಕುಮಾರಸ್ವಾಮಿಯವರು ರಾತ್ರಿ ಹೊತ್ತು ಆಟೋ ಡ್ರೈವರ್ ಆಗಿ ಕೆಲಸ ಮಾಡಿ; ಹಗಲು ಹೊತ್ತು ಶಾಲಾ-ಕಾಲೇಜಿಗೆ ಹೋಗಿ, ವಿದ್ಯೆಯನ್ನು ಸಂಪಾದಿಸಿದ ವೈಚಾರಿಕ ಚಿಂತಕರು.ನವಾಬ, ವಚನಕಾರರ ಜೀವನ ದೃಷ್ಟಿ ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ ದೇವುಡು, ಸಂಗತ, ಕಾಲಮಾನ, ಕಿನ್ನರಿ ಜೋಗಿಗಳು, `ಬೇರುತೋರಿದ ಹಾದಿ, ಗುಲಾಬಿ ಮತ್ತು ಪಾರಿವಾಳ, ಸಕಲೇಶಮಾದರಸ, ವೀರಶೈವ ಕಾವ್ಯ ಪರಂಪರೆ - ಮೊದಲಾದ ಕೃತಿಗಳನ್ನು ಪ್ರಕಟಿಸಿರುವ ಕುಮಾರ ಚಲ್ಯ ಅವರು ಕನರ್ಾಟಕ ಜಾತ್ರೆಗಳು, ಜನಪದಸಾಹಿತ್ಯ, ಪ್ರಾದೇಶಿಕ ಜಾನಪದ ಬಂಡಾಯ ಸಾಹಿತ್ಯ ಹತ್ತು ವರ್ಷ- ಮೊದಲಾದ ಕೃತಿಗಳನ್ನು ಸಂಪಾದಿಸಿ ಕನ್ನಡ ನಾಡು-ನುಡಿಗೆ ಸಮಪರ್ಿಸಿದ್ದಾರೆ. ಕೃತಿನಿಷ್ಠವಿಮರ್ಶಕರೂ, ಸಮಾಜಮುಖಿ-ಜೀವನ್ಮುಖಿಯಾದ ಸೃಜನಶೀಲ ಲೇಖಕರೂ, ಸಾಮರಸ್ಯದ ಸವಿಗನಸಿನ ಕವಿಗಳೂ, ಆದ ಕುಮಾರಚಲ್ಯ ಅವರು ದೇವುಡು ಅವರ ಸೃಜನಶೀಲ ಸಾಹಿತ್ಯ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿರುವರು. ಮುನ್ನೂರುಕ್ಕೂ ಹೆಚ್ಚು ಸಂಪ್ರಬಂಧಗಳನ್ನು ವಿದ್ವತ್ ಗೋಷ್ಠಿಗಳಲ್ಲಿ ಮಂಡಿಸಿರುವ ಶ್ರೀಯುತರು, ದಸರಾ ಕವಿಸಮ್ಮೇಳನ, 65, 71 ಮತ್ತು 73ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ, ಕನರ್ಾಟಕ ಸಾಹಿತ್ಯ ಅಕಾಡೆಮಿ, ಕನರ್ಾಟಕ ಜಾನಪದ ಯಕ್ಷಗಾನ ಅಕಾಡೆಮಿ ಮೊದಲಾದ ಸಂಘ ಸಂಸ್ಥೆಗಳು ಏರ್ಪಡಿಸಿದ ವಿಚಾರ ಸಂಕಿರಣಗಳಲ್ಲಿ ತಮ್ಮ ವಿದ್ವತ್ತು, ಸೃಜನಶೀಲತೆ, ವಿಮಶರ್ಾ ಮನೋಧರ್ಮವನ್ನು, ಘನ ಚಿಂತನೆಗಳನ್ನು ಆಭಿವ್ಯಕ್ತಿಸಿರುವರು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕ, ಮೊಟ್ಟಮೊದಲ ಸಾರ್ವಜನಿಕ ಸಂಪರ್ಕಧಿಕಾರಿ, ಕನ್ನಡ ಕಂಪ್ಯೂಟರ್ ಕೇಂದ್ರದ ಸಂಚಾಲಕ, ವಾತರ್ಾಪತ್ರದ ಸಂಪಾದಕ, ಪರೀಕ್ಷಾ ಮಂಡಳಿ ಅಧ್ಯಕ್ಷ, ಪಠ್ಯಪುಸ್ತಕ ಸಮಿತಿ ಸದಸ್ಯ, ಮೈಸೂರು, ಬೆಂಗಳೂರು, ಮಂಗಳೂರು, ಕನರ್ಾಟಕ, ಕೇರಳ ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿ ಸದಸ್ಯ ಈ ಮೊದಲಾದ ಹುದ್ದೆಗಳಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುವಲ್ಲಿ ಸಫಲರಾಗಿರುವ ಡಾ. ಕುಮಾರ ಚಲ್ಯ ಅವರು ಸಹೃದಯರ ಗೌರವ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯ ಪ್ರಸಾರಂಗದ ನಿದರ್ೆಶಕರಾಗಿ, ಕನ್ನಡ ಭಾರತಿ ನಿದರ್ೆಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಭದ್ರಾವತಿಯಲ್ಲಿ ನಡೆದ 2ನೇ ತಾಲ್ಲೂಕು ಶರಣಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವವನ್ನು ಬಿಟ್ಟರೆ, ಯಾವುದೇ ಪ್ರಶಸ್ತಿ, ಪುರಸ್ಕಾರ, ಬಹುಮಾನಗಳಿಗೆ ಹಾಗೂ ಅತಿ ಜನಪ್ರಿಯತೆಗೆ ಬಹುದೂರವಿರುವ ಡಾ. ಕುಮಾರಚಲ್ಯ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಹತ್ತು ಅಭ್ಯಥರ್ಿಗಳು, ನಾಲ್ಕು ಅಭ್ಯಥರ್ಿಗಳು ಎಂ.ಫಿಲ್. ಪದವಿಯನ್ನು ಪಡೆದಿರುತ್ತಾರೆ. ಸಾವಿರಾರು ಶಿಷ್ಯರ ಬದುಕನ್ನು ಸರಿದಾರಿಯಲ್ಲಿ ನಿರ್ವಹಿಸುವಂತೆ ಸನ್ಮಾರ್ಗದರ್ಶಕರಾಗಿದ್ದಾರೆ. ಇಂಥಹ ಸಾತ್ವಿಕ ಧೀಮಂತ ಪ್ರತಿಭೆಗೆ ಬಳ್ಳಾರಿಯ ಡಾ. ಸುಭಾಷ್ಭರಣಿ ಸಾಂಸ್ಕೃತಿಕ ವೇದಿಕೆಯು ಶ್ರೇಷ್ಠ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಔಚಿತ್ಯ ಪೂರ್ಣವಾಗಿದೆ. ಶ್ರೀಯುತರ ಸಾಹಿತ್ಯಿಕ, ಆಡಳಿತ್ಮಾಕ, ಸೃಜನಶೀಲ ಸಾತ್ವಿಕ ಸೇವೆ ಇನ್ನೂ ನೂರ್ಮಡಿಯಾಗಲಿ.

ಸಿ.ಎಂ. ಅಶೋಕನೆಲ್ಲಿಕಟ್ಟೆ
ಪ್ರಕಾಶಕರು, ಬೆಳಗುಶ್ರೀ ಪ್ರಕಾಶನ
ನೆಲ್ಲಿಕಟ್ಟೆ, ಕಾಲಗೆರೆ :ಅಂಚೆ.
ಭರಮಸಾಗರ : ಹೋಬಳಿ. ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ.

Wednesday, November 19, 2008

Bio Data - Curriculum Vitae of Dr. Nellikatte Siddesh

Name and Address :
Dr. Nellikatte S Siddesh
M.A., M.Ed., Ph.D.
Asst. Professor in Kannada,
Department of Kannada Bharathi

Kuvempu University
Jnana Sahyadri
Shankaraghatta
PIN : 577 451,
Bhadravathi Taluk
Shimoga District.

Date of Birth : 04-03-1972

Permanent Address :
Nellikatte, Kalagere-577 519,
Bharamasagara: Hobali,
Chitradurga Taluk & Dist.

Educational Qualification: : M.A., M.Ed., Ph.D.
1. B.A. - 7th Rank - Kuvempu University
2. B.Ed., Gold Medal in Commemoration of Revnd. Sirigere Sri Shivakumar Shivacharya Swamiji.
3. M.A. (Kannada) 3rd Rank - Kuvempu University.
4. M.Ed., Ist Class-K.S.O.U. Mysore.
5. Ph.D. - A study of Abhinava Kalidasa Basavappa Shashtri - Kuvempu University.

Educational Service:
1. Secondary School Teacher (Kannada) Date 13-06-1997 to 21-10-2005
2. Block Resource Person - 22-10-2008 to 10-11-2008
3. Lecturer (Article 32) 11-11-2005 to 23-07-2007
4. Gazetted Lecturer - 24-07-2007 -

Trainings Undergone:
1. Training for State Literary Resource persion.
2. Camp of Administrative Kannada.
3. Training for Moral and Spiritual Education.
4. Training for Value Education and Rajayoga
5. Computer Training
6. Training for Administrative Service.

Books Published:
1. Bisilu-Male (Collection of Poems)
2. Chalabeku Sharanange. (Collections of Articles)
3. Vyakthitva Vikasa Hagu Kannada Sahithya.
4. Sahithi Sankula
5. Parisara Mathe Salumarada Thimmakka.
6. Yuva Janathe mattu Duschatagalu
7. Abhinava Kalidasa Basavappa Shasthri
8. Bharatada Dhira Mahile Onake Obavva (Editor)

Topics Presental in Workshops and Seminars:
1. Personality and Achievement of Dr. Radha Krishnan, D.P.I. Holalkere
2. A Unified Karnataka Dream of Kannadigas
3. Kannada Literature and Personality Development-Unesco Club.
4. Kuvempu Namana
5. Rajyotsava
6. History of Karnataka
7. (Kayaka and Dasoha) Work and Charity Vachanakaras
8. Thoughts of Sharana in Literature
9. The Youth and Bad habits
10. Life and Literature

Published Articles:
1. Is India a Secular Country?
2. Does God exist?
3. Amelioration of Dalits and Establishment of Gurupeetas.
4. I never forget
5. Special Lecture on ‘Shivabhakta Shivanagamayya’
6. Service to Environment (Society) is service to God.
7. Ancient Kannada Literature and personality development
8. Vachana Literature and Personality Development.
9. Literature of Harihara, Raghavanka & Personality Development.
10. Family is the first school
11. What is not there in the Creation?
12. Constitution, a flood light for the universalisation of Education
13. Universalisation of Education and Society
14. Concept of Education
15. School, a centre of knowledge, makes man a Mahatma, (a great soul)
16. Mass Media - a inspiration of individual progress. and etc.
(Note: These Articles are published in Kannada Language)

Seminars Participated:
1. 5th Chitradurga Jilla Kannada Sahitya Sammelana - Kavigoshti 1991.
2. Chitradurga Jilla Yuva Kavigoshti
3. State Conference for poets.
4. Conference of Poets in Prison, Chitradurga.
5. Conference of Poets in Dooradarshana
6. 71st All India Kannada Sahitya Sammelana
7. Chitradurga Jilla Utsava - Poets’ Conference
8. 73rd All India Kannada Sahithya Sammelana.
9. Poet’s Conference Kannada Book Authority.
10. Lecture in Awareness Programme Organised by Kuvempu University.
11. Special Speech on the Land and Language.

Work Shops attended:
1. Literary Workshop
2. Workshop in Adult Education
3. A Literary Study of Lankesh
4. Cultural Camp: Neenasam
5. Workshop for Poems
6. Camp for Administrative Kannada.

Column Writings:
1. Spardha Kannada and Shikshana Siri in the monthly periodical spardhajagathu.
2. Literature which develops the personality in Psychology and Personality Development.

Awards Received
1. Prize in the State level Esay Competition. (twice)
2. Shikshakaratna Award
3. Prize State Level Singing Competition.
4. Shikshana Premi Award.
5. Best Teacher Award (D.P.I.)
6. Prize Won State Level Esay Competition.
8. Dr. A. Narasimhaiah Award
9. Felicitation in Akhila Karnataka First Dalit Sahitya Sammelana,


Some memorable moments






ಕೆಲವು ಆತ್ಮೀಯ ಕ್ಷಣಗಳು